What We Do

Our Activities

From free medical camps to educational scholarships, blood donation drives to community celebrations — follow our latest activities and events on the ground.

HealthcareEducationCommunityReligious

In Detail

Recent Activity Updates

ಸೇವಾಂಜಲಿಯಲ್ಲಿ ಕ್ಷಯ ರೋಗಿಗಳಿಗೆ ದವಸ ಧಾನ್ಯ ವಿತರಣೆ
Healthcare5 May 2026

ಸೇವಾಂಜಲಿಯಲ್ಲಿ ಕ್ಷಯ ರೋಗಿಗಳಿಗೆ ದವಸ ಧಾನ್ಯ ವಿತರಣೆ

ಆಹಾರ ಸೇವನೆಯ ಮೂಲಕ ಆರೋಗ್ಯವಂತರಾಗಿ ಬಾಳಬೇಕು. ಔಷಧಿಯನ್ನು ವೃತದಿಂದ‌ ಸೇವಿಸಬೇಕು. ನಾವು ಸದೃಢರಾಗಿದ್ದರೆ ನಮ್ಮ‌ ದೇಶ ಸದೃಢವಾಗಲಿದೆ. ಸರಕಾರ ಮಾಡುವ ಕಾರ್ಯದಲ್ಲಿ ಸೇವಾಂಜಲಿ ಪ್ರತಿಷ್ಠಾನ ಕೈ ಜೋಡಿಸಿದಂತೆ ಸೇವಾಂಜಲಿಯ ಸೇವಾ ಕಾರ್ಯದಲ್ಲಿ ನಾವೂ ಕೈ ಜೋಡಿಸೋಣ ಎಂದು ದ.ಕ.ಜಿಲ್ಲಾ ಕಸಾಪ‌ ನಿಕಟಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.

ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ನಡೆದ ಕ್ಷಯ ರೋಗಿಗಳಿಗೆ ದವಸಧಾನ್ಯ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸರಕಾರದ ಯೋಜನೆಯನ್ನು ಸಮಾಜದ ಜನತೆಗೆ ತಲುಪಿಸುವ ಸೇವಾಂಜಲಿಯ ಕಾರ್ಯ ಅಭಿನಂದನೀಯ ಎಂದು ತಿಳಿಸಿದರು.

ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.‌ ಚೇತನ್ ಆರೋಗ್ಯ ಮಾಹಿತಿ ನೀಡಿ ಕೆಮ್ಮು ಮೊದಲಾದ ಕ್ಷಯ ರೋಗದ ಲಕ್ಷಣಗಳು ಕಂಡು ಬಂದಾಗ ವೈದ್ಯರಿಂದ ತಪಾಸಣೆ ನಡೆಸಿ ಔಷಧಿಯೊಂದಿಗೆ ಪೌಷ್ಟಿಕಾಹಾರ ಸೇವಿಸಿದಾಗ ರೋಗವನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿದೆ ಎಂದರು.

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ತಾಲೂಕಿನ‌ ಕ್ಷಯ ರೋಗಿಗಳನ್ನು ಗುರುತಿಸಿ ಪೌಷ್ಟಿಕಾಹಾರ ದ ಕಿಟ್ ನೀಡಲಾಗಿದೆ. ಇದು 44 ನೇ ತಿಂಗಳ ಕಾರ್ಯಕ್ರಮವಾಗಿದ್ದು ಈವರೆರೆ 225 ಮಂದಿ ಕ್ಷಯರೋಗಿಗಳಿಗೆ ದವಸ ಧಾನ್ಯ ವಿತರಿಸಲಾಗಿದ್ದು 15 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದರು.

ಸೇವಾಂಜಲಿಯ ಟ್ರಸ್ಟಿ, ಕೇಶವ ದೋಟ, ಉದಯ ಕುಮಾರ್ ಮಲ್ಲಿ ವೇದಿಕೆಯಲ್ಲಿ ಇದ್ದರು. ಪ್ರಮುಖರಾದ

ಚಂದ್ರಹಾಸ ಕಡೆಗೋಳಿ, ವಿಕ್ರಂ ಫರಂಗಿಪೇಟೆ, ವಿಜೇತ್ ತುಂಬೆ, ಶಿವರಾಜ್ ಸುಜೀರ್, ದಿನೇಶ್ ತುಂಬೆ ಮತ್ತಿತರರು ಉಪಸ್ಥಿತರಿದ್ದರು

ಟ್ರಸ್ಟಿ ದೇವದಾಸ್ ಶೆಟ್ಟಿ ಕೊಡ್ಮಾಣ್ ಕಾರ್ಯಕ್ರಮ ನಿರೂಪಿಸಿದರು.

ಫರಂಗಿಪೇಟೆ :ಕ್ಷಯ ರೋಗಿಗಳಿಗೆ ದವಸ ಧಾನ್ಯದ ಕಿಟ್ ವಿತರಣೆ. ಉತ್ತಮ ಆಹಾರವೇ ಒಳ್ಳೆಯ ಔಷದಿ :ಅನಿಲ್ ಕುಮಾರ್ ಭೂಮರಡ್ಡಿ
Healthcare22 April 2026

ಫರಂಗಿಪೇಟೆ :ಕ್ಷಯ ರೋಗಿಗಳಿಗೆ ದವಸ ಧಾನ್ಯದ ಕಿಟ್ ವಿತರಣೆ. ಉತ್ತಮ ಆಹಾರವೇ ಒಳ್ಳೆಯ ಔಷದಿ :ಅನಿಲ್ ಕುಮಾರ್ ಭೂಮರಡ್ಡಿ

ಬಂಟ್ವಾಳ :ಒಳ್ಳೆಯ ಆಹಾರ ಸೇವನೆ ಮಾನವನ ಜೀವನದಲ್ಲಿ ತುಂಬಾ ನಿರ್ಣಾಯಕ ಪಾತ್ರ ನಿರ್ವಹಿಸುತ್ತದೆ, ಉತ್ತಮ ಆಹಾರವೇ ಒಳ್ಳೆಯ ಔಷದಿ, ಪೌಷ್ಟಿಕ ಆಹಾರ ಸೇವಿಸುವ ಮೂಲಕ ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸಿ ರೋಗ ಮುಕ್ತಗೊಳಿಸಬಹುದು.ಸ್ವಾಸ್ತ್ಯ ವ್ಯಕ್ತಿಯಿಂದ ಸ್ವಾಸ್ತ್ಯ ಸಮಾಜ ನಿರ್ಮಾಣ ಸಾಧ್ಯ ಎಂದು ದ ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ನಿರ್ದೇಶಕ ಅನಿಲ್ ಕುಮಾರ್ ಭೂಮರಡ್ಡಿ ಹೇಳಿದರು.

ಅವರು ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಸೇವಾಂಜಲಿಸಭಾಗೃಹದಲ್ಲಿ ಕ್ಷಯ ರೋಗಿಗಳಿಗೆ ದವಸ ಧಾನ್ಯದ ಕಿಟ್ ವಿತರಣೆ ಮಾಡಿ ಮಾತನಾಡಿ, ಸಮಾಜಮುಖಿ ಕೆಲಸಕ್ಕೆ ಇಚ್ಛಾಶಕ್ತಿಯಿಂದ ಮುನ್ನುಗ್ಗಿದರೆ ಯಾವುದು ಕೂಡ ಅಸಾಧ್ಯವಲ್ಲ, ಸೇವೆಯೇ ಪರಮ ಧರ್ಮ ಎಂಬ ನೆಲೆಯಲ್ಲಿ ಸೇವಾ ಮನೋಭಾವದಿಂದ ಮುನ್ನಡೆಯುತ್ತಿರುವ ಸೇವಾಂಜಲಿ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಪುದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಾ. ಸ್ಮೃತಿ ಯು ಮಾತನಾಡಿ ಕ್ಷಯ ರೋಗವನ್ನು ಮುನ್ನೆಚ್ಚರಿಕೆಯಿಂದ ತಡೆಗಟ್ಟಬಹುದು ಹಾಗೂ ಸೇವಾಂಜಲಿ ಪ್ರತಿಷ್ಠಾನ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ನೀಡುವ ಮೂಲಕ ನಿಸ್ವಾರ್ಥ ಸೇವೆ ಮಾಡುತ್ತಿದೆ ಎಂದರು.

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ

ಕುಮಾರ್ ಪೂಂಜ ಪ್ರಸ್ತವಿಕವಾಗಿ ಮಾತನಾಡಿ , 43 ತಿಂಗಳುಗಳಲ್ಲಿ ರೂ 14ಲಕ್ಷ ವ್ಯಹಿಸಿ 224 ಕ್ಷಯ ರೋಗಿಗಳಿಗೆ ದವಸ ಧಾನ್ಯದ ಕಿಟ್ ವಿತರಿಸಲಗಿದೆ, ಪ್ರತಿಷ್ಠಾನದ ಮೂಲಕ ನಿರಂತರ ಅರೋಗ್ಯ ಶಿಬಿರಗಳನ್ನು ನಡೆಸುವ ಮೂಲಕ ತಿಂಗಳಿಗೆ 3ಸಾವಿರ ರೋಗಿಗಳು ಶಿಬಿರದ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.

ವೇದಿಕೆಯಲ್ಲಿ ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಅರ್ಜುನ ಕೆ ಪೂಂಜ ಉಪಸ್ಥಿತರಿದ್ದರು.

ಪ್ರಮುಖರಾದ ಪದ್ಮನಾಭ ಶೆಟ್ಟಿ ಪುಂಚಮೆ,ಭಾಸ್ಕರ ಚೌಟ ಕುಮ್ದೇಲ್, ದಿನೇಶ್ ಪ್ರಗತಿ,ಪದ್ಮನಾಭ ಕಿದೆಬೆಟ್ಟು, ಸುರೇಶ ಶೆಟ್ಟಿ ಪೆಲಪಾಡಿ,ಮೋಹನ್ ಬೆಂಜನಪದವು, ನಾರಾಯಣ ಬಡ್ದುರು, ಪ್ರಶಾಂತ್ ತುಂಬೆ,ಶಿವರಾಜ್ ಸುಜೀರು,ಗಿರೀಶ್ ಪಂದೆಜಾರು,ವಿದ್ಯಾ,ಗಾಯತ್ರಿ ಶೋಭಾ,ಸಾರಮ್ಮ, ಕಾವ್ಯ ಬೆರ್ವ ಮತ್ತಿತರರು ಉಪಸ್ಥಿತರಿದ್ದರು.

ಸೇವಾಂಜಲಿಯಲ್ಲಿ‌ 135ನೇ ರಕ್ತದಾನ ಶಿಬಿರ, 57 ಯುನಿಟ್ ರಕ್ತ ಸಂಗ್ರಹ
Healthcare29 March 2026

ಸೇವಾಂಜಲಿಯಲ್ಲಿ‌ 135ನೇ ರಕ್ತದಾನ ಶಿಬಿರ, 57 ಯುನಿಟ್ ರಕ್ತ ಸಂಗ್ರಹ

ಬಂಟ್ವಾಳ: ತುರ್ತು ಸಂದರ್ಭದಲ್ಲಿ ಜನರಿಗೆ ಆಗೂ ಆಸ್ಪತ್ರೆಗಳ ರಕ್ತನಿಧಿಗೆ ರಕ್ತದ ಅವಶ್ಯಕತೆ ಇದ್ದಾಗ ಸೇವಾಂಜಲಿ ಸಂಸ್ಥೆ ನಿರಂತರ ಶಿಬಿರಗಳನ್ನು ಹಮ್ಮಿಕೊಂಡು ರಕ್ತದ ಬೇಡಿಕೆಯನ್ನು ಪೂರೈಸುತ್ತಿರುವುದು ಉತ್ತಮ ಕಾರ್ಯ ಎಂದು ಬಂಟ್ವಾಳ ಉಪವಿಭಾಗದ ಸಹಾಯಕ ಅಧೀಕ್ಷಕ ಯಶ್ ಕುಮಾರ್ ಶರ್ಮ‌ ಹೇಳಿದರು.

ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ , ಕೆ. ಎಸ್. ಹೆಗ್ಡೆ ಆಸ್ಪತ್ರೆಯ ಸಹಯೋಗದೊಂದಿಗೆ ಫರಂಗಿಪೇಟೆಯ ಸೇವಾಂಜಲಿ ಸಭಾಗ್ರಹದಲ್ಲಿ ಭಾನುವಾರ ನಡೆದ 135 ನೇ ರಕ್ತದಾನ ಶಿಬಿರವನ್ನು ದೀಪ ಬೆಳಗಿಸಿ, ಸ್ವಯಂ ರಕ್ತದಾನ ಮಾಡುವ ಮೂಲಕ‌ ಉದ್ಘಾಟಿಸಿ ಮಾತನಾಡಿದರು.

ನಗರ ಭಾಗದಲ್ಲಿ ಬ್ಲಡ್ ಬ್ಯಾಂಕ್ ಗಳು ಅಗತ್ಯ ಸಂದರ್ಭದಲ್ಲಿ ರಕ್ತ ಒದಗಿಸುವ ಕೆಲಸ‌ಮಾಡುತ್ತದೆ ಆದರೆ ಗ್ರಾಮೀಣ ಭಾಗಗಳಲ್ಲಿ ಅತಂಹ ವ್ಯವಸ್ಥೆಗಳು ಇರುವುದಿಲ್ಲ.‌ ಸೇವಾಂಜಲಿ ಸಂಸ್ಥೆ ಹಲವು‌ ವರ್ಷಗಳಿಂದ‌ ಇಂತಹ ಸೇವಾ ಕಾರ್ಯ ನಡೆಸುತ್ತಿರುವುದು ಅಭಿನಂದನೀಯ ಎಂದರು.

ರೋಟರಿ ಜಿಲ್ಲೆ‌‌ 3181ನ ಮಾಜಿ ಗವರ್ನರ್ ಎನ್.‌ಪ್ರಕಾಶ್ ಕಾರಂತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ರಕ್ತದ ಕೊರತೆ ಎದುರಿಸುತ್ತಿರುವ ಈ ಕಾಲಘಟ್ಟದಲ್ಲಿ ಆಸ್ಪತ್ರೆಗಳ ಬೇಡಿಕೆಗನುಗುಣವಾಗಿ‌ ಸೇವಾಂಜಲಿ ಸಂಸ್ಥೆ ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡು ಬರುತ್ತಿದೆ.

ಸೇವಾಂಜಲಿಯ ಕೃಷ್ಣ ಕುಮಾರ್ ಪೂಂಜ ಅವರು‌

ಅನೇಕ ಸಂಸ್ಥೆಗಳಿಗೆ ಪ್ರೇರಕರಾಗಿದ್ದು ಕೊಂಡು ಜನ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ.‌ ಚುನಾಯಿತ ಜನಪ್ರತಿನಿಧಿ ಮಾಡಬೇಕಾಧ ಕಾರ್ಯವನ್ನು ಅವರು ಮಾಡುತ್ತಿದ್ದು ಸ್ವಸ್ಥ, ಸುಂದರ ಸಮಾಜ ನಿರ್ಮಾಣವಾಗಲು ನಾವೆಲ್ಲಾ ಅವರೊಂದಿಗೆ ಕೈ ಜೋಡಿಸುವಂತೆ ತಿಳಿಸಿದರು.

ಸೇವಾಂಜಲಿಯ ಆರೋಗ್ಯ ಕೇಂದ್ರದ ವೈದ್ಯ ಡಾ. ಚೇತನ್ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು.

ಕೆಎಂಸಿ ಬ್ಲಡ್ ಬ್ಯಾಂಕಿನ ಅನಿಲ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಒಂದು ಯುನಿಟ್ ರಕ್ತದಾನ ಮಾಡುವ ಮೂಲಕ 4 ಮಂದಿಯ ಪ್ರಾಣ ಉಳಿಸಲು ಸಾಧ್ಯವಿದ್ದು ಸ್ಚಯಂ ಪ್ರೇರಣೆಯಿಂದ ರಕ್ತದಾನದಲ್ಲಿ ಭಾಗವಹಿಸುವಂತೆ ತಿಳಿಸಿದರು. ಟ್ರಸ್ಟಿ ಕೊಡ್ಮಾಣ್ ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಮುಖರಾದ ಡಾ. ರಾಮಕೃಷ್ಣ ಇರ್ವತ್ತೂರು ಸುಕೇಶ್ ಶೆಟ್ಟಿ ತೇವು, ಅರ್ಜುನ್ ಪೂಂಜ, ಬಿ.ನಾರಾಯಣ ಮೇರಮಜಲು, ದಿನೇಶ್ ತುಂಬೆ, ಹರ್ಷ ರಾಜ್ ಸುಜೀರು, ಪ್ರಕಾಶ್ ಕಿದೆಬೆಟ್ಟು, ಸುರೇಶ್ ರೈ ಪೆಲಪಾಡಿ, ಮೋಹನ್ ಬೆಂಜನಪದವು, ಜಯಾನಂದ ನಾಯ್ಕ್ ಕುಮ್ಡೇಲು, ಧನರಾಜ್ ತುಂಬೆ, ಪ್ರಮೋದ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಶಿಬಿರದಲ್ಲಿ‌ ಒಟ್ಟು 57 ಯುನಿಟ್ ರಕ್ತ ಸಂಗ್ರಹವಾಯಿತು.

Be a part of the change

Support our activities

Your donations directly fund these programmes. Every contribution helps us reach more people in need.